Vishwaguru

ಹುಟ್ಟಿದಹಬ್ಬಕ್ಕೆ ಮೋದಿಯ ಉಡುಗೊರೆ!

ಮೋದಿಯ ಹುಟ್ಟಿದಹಬ್ಬಕ್ಕೆ ರಾಷ್ಟ್ರ ಇದಕ್ಕಿಂತಲೂ ಒಳ್ಳೆಯ ಕೊಡುಗೆ ಕೊಡುವುದು ಸಾಧ್ಯವೇ ಇರಲಿಲ್ಲ. ಎರಡೂವರೆ ಕೋಟಿ ವ್ಯಾಕ್ಸಿನ್ಗಳನ್ನು ಜನರಿಗೆ ನೀಡಿ ದೇಶದ ಆರೋಗ್ಯವನ್ನು ಹೆಚ್ಚು ಗಟ್ಟಿ ಮಾಡಲಾಯ್ತು. ಮೂರನೇ ಅಲೆಯನ್ನು ತಡೆಯುವ ಸೈನಿಕರನ್ನಾಗಿ ನಮ್ಮನ್ನೇ ರೂಪಿಸಲಾಯ್ತು. ಹುಟ್ಟಿದ ದಿನವೊಂದು ಸಾರ್ವಜನಿಕ ಹಬ್ಬವಾಗುವುದು ಹೀಗೆಯೇ. ಅವರು ನೂಕರ್ಾಲ ಹಿತವಾಗಿ ಬಾಳಲಿ.


ಮತ್ತೆ ಹೇಳಿದ್ದನ್ನೇ ಹೇಳಬೇಕು ಎನ್ನುವುದಾದರೆ ಎರಡನೇ ಅಲೆಯ ವೇಳೆಗೆ ವ್ಯಾಕ್ಸಿನ್ಗಳ ವಿಚಾರವಾಗಿ ಅರಚಾಡುತ್ತಿದ್ದ ಕಾಂಗ್ರೆಸ್ಸು ನ್ಯೂಜಿಲೆಂಡಿನ ಪ್ರಧಾನಿಯಿಂದ ಭಾರತ ಕಲಿಯಬೇಕಿದೆ ಎಂದೆಲ್ಲಾ ಹೇಳಿತ್ತು. ಕೆಲವರಂತೂ ನ್ಯೂಜಿಲೆಂಡಿನ ಪ್ರಧಾನಿಯನ್ನೇ ಭಾರತದ ಆಡಳಿತ ಸೂತ್ರ ವಹಿಸಲು ಕರೆಯುವುದೊಳಿತು ಎಂದು ಟ್ರಾಲ್ ಮಾಡಿದ್ದರು. ಈಗೇನು ಗೊತ್ತೇ? ಮೋದಿಯ ಹುಟ್ಟುಹಬ್ಬದ ದಿನವೇ ಭಾರತ ಐದು ನ್ಯೂಜಿಲೆಂಡ್ಗಳಿಗೆ ವ್ಯಾಕ್ಸಿನೇಷನ್ ಮಾಡಿಸಿದಂತಾಗಿದೆ. ಬಹುಶಃ ನೆಲ್ಸನ್ ಮಂಡೇಲಾ ಮತ್ತು ಮಹಾತ್ಮಾ ಗಾಂಧೀಜಿಯವರ ನಂತರ ಜಗತ್ತಿನ ಅತಿಹೆಚ್ಚು ಜನರಿಂದ ಅಚ್ಚರಿ ಮಿಶ್ರಿತ ಗೌರವಕ್ಕೆ ಪಾತ್ರವಾಗುತ್ತಿರುವ ವ್ಯಕ್ತಿ ನರೇಂದ್ರಮೋದಿಯೇ ಇರಬೇಕು. ತನ್ನ ಉದ್ದೇಶ, ಗುರಿಗಳತ್ತ ದೃಢವಾದ ಹೆಜ್ಜೆಯನ್ನಿಡುತ್ತಾ ತಾನು ನಂಬಿಕೊಂಡ ಸಿದ್ಧಾಂತದ ಬುಡದಮೇಲೆ ರಾಷ್ಟ್ರದ ಹಿತ ನಿಮರ್ಿಸುತ್ತಾ ಸಾಗುವ ವ್ಯಕ್ತಿಯೊಬ್ಬ ಏನಾಗಬಹುದೆನ್ನುವುದಕ್ಕೆ ನರೇಂದ್ರಮೋದಿ ಅನೇಕ ಶತಮಾನಗಳ ಕಾಲ ಉದಾಹರಣೆಯಾಗಿ ನಿಲ್ಲಬಲ್ಲರು. ಈ ದೇಶವಂತೂ ಬದಲಾದ ತನ್ನ ವರ್ತಮಾನದ ಕುರಿತಂತೆ ಮತ್ತು ಭವ್ಯವಾಗಲಿರುವ ಭವಿಷ್ಯದ ಕುರಿತಂತೆ ನೆನಪಿಸಿಕೊಂಡಾಗಲೆಲ್ಲ ಮೋದಿಗೊಂದು ನಮನವನ್ನು ಖಂಡಿತ ಸಲ್ಲಿಸುತ್ತದೆ.

ಕರೋನಾದ ಎರಡನೇ ಅಲೆಯ ವೇಳೆಗೆ ಅವರ ಮುಖ ಬಾಡಿದಂತೆ ಕಾಣುತ್ತಿತ್ತು. ಸಾಧ್ಯವಾದರೆ ಅರವಿಂದ್ ಕೇಜ್ರಿವಾಲ್ರಾದಿಯಾಗಿ ಇತರೆ ಎಲ್ಲ ಮುಖ್ಯಮಂತ್ರಿಗಳೊಂದಿಗೆ ಮೋದಿಯವರು ಆಪ್ತ ಮಾತುಕತೆ ನಡೆಸುವಾಗಿನ ವಿಡಿಯೊ ಮತ್ತೊಮ್ಮೆ ನೋಡಿ. ಅಂದೂ ಕೂಡ ಕೇಜ್ರಿವಾಲ್ ತನ್ನ ಎಂದಿನ ನಾಟಕದ ಮೂಲಕ ನರೇಂದ್ರಮೋದಿಯವರನ್ನು ಜನರ ಮುಂದೆ ಸಿಕ್ಕುಹಾಕಿಸುವ ಪ್ರಯತ್ನ ಮಾಡಿದ್ದ. ನರೇಂದ್ರಮೋದಿ ಕ್ಷಣದಲ್ಲೇ ಆತನ ಬಣ್ಣ ಬಯಲಿಗೆಳೆದು ಧೂರ್ತತೆಯನ್ನು ಜಗಜ್ಜಾಹೀರುಗೊಳಿಸಿದರು. ಅಂದಿನ ಆ ವಿಡಿಯೊದಲ್ಲಿ ಊದಿಕೊಂಡಿರುವ ಮುಖ, ಬತ್ತಿ ಹೋಗಿರುವ ಕಂಗಳು, ನಿದ್ದೆ ಕಳೆದುಕೊಂಡು ಕೆಲಸ ಮಾಡುತ್ತಿರುವ ಅವರ ಪರಿಸ್ಥಿತಿಯನ್ನು ತೋರಿಸುತ್ತಿತ್ತು. ಹಗಲು-ರಾತ್ರಿ ವ್ಯಾಕ್ಸಿನ್ಗಳ ಕುರಿತಂತೆ, ಆಮ್ಲಜನಕದ ಕುರಿತಂತೆ, ಆಸ್ಪತ್ರೆಗಳ ವ್ಯವಸ್ಥೆಯ ಕುರಿತಂತೆ ಭಾರತದ ಮತ್ತು ಜಗತ್ತಿನ ಅನೇಕರ ನಡುವೆ ಸಂಪರ್ಕ ಸಾಧಿಸುತ್ತಾ ಎರಡನೇ ಅಲೆಯನ್ನು ಹಿಡಿತಕ್ಕೆ ತಂದುಕೊಳ್ಳುವ ಪ್ರಯತ್ನ ಅವರು ಮಾಡುತ್ತಿದ್ದರಲ್ಲ, ಇಂದು ನಿಂತು ಹಿಂದಿರುಗಿ ನೋಡಿದರೆ ಕೈ ಎತ್ತಿ ನಮಿಸಬೇಕೆನಿಸುವಷ್ಟು. ಆ ವೇಳೆಗೆ ಅಮೇರಿಕಾದಲ್ಲಿದ್ದ ವಿದೇಶಾಂಗ ಸಚಿವ ಜೈಶಂಕರ್ ಅಲ್ಲಿನ ವಿಶ್ವವಿದ್ಯಾಲಯದೊಂದಿಗೆ ಆನ್ಲೈನ್ ಸಂವಾದದಲ್ಲಿ ಭಾಗವಹಿಸಿ ಜನರಲ್ ಮ್ಯಾಕ್ಮಾಸ್ಟರ್ರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಸಹಜವಾದ ಅಮೇರಿಕನ್ನರ ಧಿಮಾಕು ಪ್ರಶ್ನೆ ಕೇಳುವವರಲ್ಲಿತ್ತು. ಎಂದಿನಂತೆ ಭಾರತದ ದಾರಿದ್ರ್ಯ, ಅನೈಕ್ಯತೆ, ಇವುಗಳನ್ನೇ ಮುಂದಿಟ್ಟುಕೊಂಡು ಆತ ಕೇಳಿದ ಕೊನೆಯ ಪ್ರಶ್ನೆಗೆ ವಿದೇಶಾಂಗ ಸಚಿವರು ಕೊಟ್ಟ ತಪರಾಕಿ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆ ಪಡುವಂತೆ ಮಾಡಿಬಿಟ್ಟಿತು. ‘ಭಾರತ ಸಾಂಸ್ಕೃತಿಕವಾಗಿ, ಭಾಷಾ ವಿಚಾರದಲ್ಲಿ, ಒಂದೇ ಮಾತಿನಲ್ಲಿ ಹೇಳುವುದಾದರೆ ಜಗತ್ತಿನಲ್ಲಿರಬಹುದಾದ ಎಲ್ಲ ವಿಚಾರಗಳಲ್ಲೂ ವಿಭಿನ್ನತೆಯನ್ನು ಹೊಂದಿರುವಂತಹ ಅಪರೂಪದ ರಾಷ್ಟ್ರ. ಪಶ್ಚಿಮ ಭಾರತವನ್ನು ತೋರಿಸುವಾಗ ಅಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆಯಿರುವುದನ್ನು, ಆಮ್ಲಜನಕದ ಕೊರತೆ ಇರುವುದನ್ನು ವೈಭವೀಕರಿಸಿ ತೋರಿಸುತ್ತಿತ್ತು. ಆದರೆ ಅದಾಗಲೇ ಅಮೇರಿಕಾ ಅಂಥದ್ದೇ ಸಮಸ್ಯೆಯನ್ನು ಎದುರಿಸಿತ್ತಲ್ಲದೇ ಮತ್ತೊಮ್ಮೆ ಎದುರಿಸಲೂ ಸಜ್ಜಾಗಿತ್ತು. ಇಷ್ಟಾದರೂ ಭಾರತದ ಸಾಮಥ್ರ್ಯವೆಂಥದ್ದೆಂದರೆ ಎರಡೂವರೆ ಪಟ್ಟು ಅಮೇರಿಕನ್ನರಿಗೆ ಭಾರತ ಉಚಿತ ಆಹಾರ ಸರಬರಾಜು ಮಾಡಿತು. ಅಂದರೆ ಸುಮಾರು 80 ಕೋಟಿ ಜನರಿಗೆ ಆಹಾರ ನೀಡಲಾಯ್ತು. ಅಮೇರಿಕಾದ ಒಟ್ಟಾರೆ ಜನಸಂಖ್ಯೆಗಿಂತ ಹೆಚ್ಚು ಜನರಿಗೆ ಭಾರತ ನೇರಹಣ ಅಕೌಂಟಿಗೆ ಹಾಕಿತು. ಹೀಗೆ ಸಾಮಾಜಿಕ ಉಪಲದ್ಭಿಯ ಕೆಲಸಗಳನ್ನು ಮಾಡುವಾಗ ಎಂದಿಗೂ ಜನರ ನಡುವೆ ಇರುವ ಈ ವೈರುಧ್ಯವನ್ನು ಭಾರತ ಗಮನಿಸಲಿಲ್ಲ’ ಎಂದರು. ಇದು ಭಾರತದ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಸಮರ್ಥವಾದ ಉತ್ತರವೇ. ನಾವು ಆಡಳಿತವನ್ನು ನಡೆಸುವಾಗ ಜಾತಿ-ಮತಗಳ ಭೇದ ಮಾಡುವುದಿಲ್ಲ ಎನ್ನುವುದು ಉತ್ತರದ ನೇರ ಅಭಿಪ್ರಾಯವಾದರೂ ಇಷ್ಟು ಜನರಿಗೆ ಉಚಿತ ಆಹಾರ, ನೇರ ಅಕೌಂಟಿಗೆ ಹಣ ಕಳಿಸುವ ತಾಕತ್ತು ಜಗತ್ತಿನ ಮತ್ಯಾವ ರಾಷ್ಟ್ರಕ್ಕಿದೆ? ಎಂಬ ಧಾಷ್ಟ್ರ್ಯದ ಪ್ರಶ್ನೆ ಈ ಉತ್ತರದೊಳಗೆ ಶಾಂತವಾಗಿ ಅಡಗಿ ಕುಳಿತಿತ್ತು. ಮ್ಯಾಕ್ಮಾಸ್ಟರ್ ಮುಂದಿನ ಪ್ರಶ್ನೆ ಕೇಳುವಾಗ ಅಮೇರಿಕ ಮತ್ತು ಭಾರತದ ಸಂಬಂಧಗಳ ಕುರಿತು ಸ್ವಲ್ಪ ಕೆರೆದರು. ಮುಲಾಜಿಲ್ಲದೇ ಉತ್ತರಿಸಿದ ಜೈಶಂಕರ್, ‘ಜಗತ್ತು ಈಗ ಬದಲಾಗಿದೆ. ಒಂದೆರಡು ರಾಷ್ಟ್ರಗಳು ಜಗತ್ತಿನ ಆಗು-ಹೋಗುಗಳನ್ನು ನಿರ್ಣಯಿಸುವ ಕಾಲ ಕಳೆದುಹೋಗಿ, ಬಹುಕೇಂದ್ರೀಯ ವ್ಯವಸ್ಥೆ ಜಾರಿಗೆ ಬಂದಿದೆ. ಅಮೇರಿಕಾ ಇದನ್ನು ಅರಿತುಕೊಳ್ಳುತ್ತಿದೆ’ ಎಂದು ಹೇಳಿ ಭಾರತ ಈಗ ಅಂಥದ್ದೇ ಒಂದು ಕೇಂದ್ರ ಎಂಬುದನ್ನು ಸೂಕ್ಷ್ಮವಾಗಿ ಮುಟ್ಟಿಸಿದರು. ‘ಅಮೇರಿಕಾ ತನ್ನನ್ನು ತಾನು ಅವಶ್ಯಕತೆಗಳಿಗೆ ತಕ್ಕಂತೆ ಪುನರ್ರೂಪಿಸಿಕೊಳ್ಳುವ ತಾಕತ್ತನ್ನು ಹೊಂದಿದೆ’ ಎಂದು ಹೇಳುವುದನ್ನೂ ಮರೆಯಲಿಲ್ಲ. ಇದು ಅಮೇರಿಕಾದ ಭಾರತ ವಿರೋಧಿ ಧೋರಣೆಗೆ ಕೊಟ್ಟ ಎಚ್ಚರಿಕೆಯೇ ಆಗಿತ್ತು. ಆಗಿನ್ನೂ ಅಮೇರಿಕಾ ತಾಲಿಬಾನನ್ನು ಬಿಟ್ಟು ಬಂದಿರಲಿಲ್ಲ. ಟ್ರಂಪ್-ಬೈಡನ್ನ ಕದನ ಜಗತ್ತಿನಲ್ಲಿ ಅಮೇರಿಕಾದ ಕುರಿತಂತೆ ಅಸಹ್ಯ ಹುಟ್ಟಿಸಿತ್ತು. ತಾಲಿಬಾನಿನ ಪ್ರಕರಣದ ನಂತರವಂತೂ ಅಮೇರಿಕಾ ಸದ್ಯಕ್ಕಂತೂ ತನ್ನ ಸಾರ್ವಭೌಮತೆಯ ಕುಚರ್ಿಯಿಂದ ಕೆಳಕ್ಕಿಳಿದಾಗಿದೆ. ಆ ಜಾಗವನ್ನು ಆಕ್ರಮಿಸಿಕೊಳ್ಳಲು ಚೀನಾ ಹವಣಿಸುತ್ತಿದೆ. ಭಾರತ ಸೂಕ್ತ ಎಚ್ಚರಿಕೆಯನ್ನು ಕೊಟ್ಟ ರೀತಿ ಇದು.

ಸ್ವಾತಂತ್ರ್ಯ ಬಂದ ಲಾಗಾಯ್ತು ನಮ್ಮ ಮಾನಸಿಕ ವ್ಯವಸ್ಥೆ ತೊಳಲಾಟದಲ್ಲೇ ಇತ್ತು. ನಮ್ಮನ್ನು ನಾವು ಪಶ್ಚಿಮದ ಬಾಲವೆಂದು ನಂಬಿಕೊಂಡುಬಿಟ್ಟಿದ್ದೆವು. ಸಿದ್ಧಾಂತ, ಆಚರಣೆಯ ಕಲ್ಪನೆ ಮತ್ತು ಅದಕ್ಕೆ ಬೇಕಾದ ಆದೇಶವೂ ನಮಗೆ ಪಶ್ಚಿಮದಿಂದಲೇ ಬರಬೇಕಿತ್ತು. ಬ್ರಿಟೀಷರು ನಮ್ಮನ್ನು ಬಿಟ್ಟು ಹೋದಾಗಿನ ಹ್ಯಾಂಗ್ಓವರ್ ಕಳೆದುಕೊಳ್ಳಲು ಸಮರ್ಥವಾಗಿಯೇ ಝಾಡಿಸುವವರು ಬೇಕಿತ್ತು. ಮೋದಿ ಆ ಜಾಡ್ಯವನ್ನು ಕಳೆದರು. ಇದಕ್ಕೆ ಒಂದೇ ಪುರಾವೆ ಏನೆಂದರೆ ಇಂದು ಮೋದಿ ವಿರೋಧೀಗಳು ಅವರು ಜಾರಿಗೆ ತಂದ ಯೋಜನೆಗಳಲ್ಲಿನ ದೋಷಗಳನ್ನು ವಿರೋಧಿಸುವ ಭರದಲ್ಲಿ ಮೋದಿಯ ವಿರೋಧ ಆರಂಭಿಸುತ್ತಾರೆ, ಕೊನೆಗೆ ದೇಶವನ್ನೇ ದೂರುತ್ತಾ ಕುಳಿತುಬಿಡುತ್ತಾರೆ. ಆದರೆ ಮೋದಿ ಮಾತ್ರ ಬಲವಾಗಿ ಹೆಜ್ಜೆಯನ್ನೂರುತ್ತಾ ಉಳಿದಿರುವ ಅವಧಿಯೊಳಗೆ ಭಾರತವನ್ನು ಜಗತ್ತಿನ ಈ ರೀತಿಯ ಅವಧಾರಣೆಗಳಿಂದ ಮುಕ್ತಗೊಳಿಸುವ ಹಠಕ್ಕೆ ಬಿದ್ದಿದ್ದಾರೆ.
ಜೈಶಂಕರ್ ತಮ್ಮ ವಿದೇಶಾಂಗ ಚಟುವಟಿಕೆಗಳಿಂದ ಭಾರತದ ಕೀತರ್ಿಪತಾಕೆಯನ್ನು ಹೆಚ್ಚಿಸುತ್ತಿದ್ದರೆ ಅದಕ್ಕೆ ಕಾರಣ ನರೇಂದ್ರಮೋದಿಯೇ. ಇಂಡಿಯನ್ ಫಾರಿನ್ ಸವರ್ೀಸ್ನಲ್ಲಿ 40 ವರ್ಷಗಳ ಕಾಲ ಅಧಿಕಾರಿಯಾಗಿ ದುಡಿದ ಜೈಶಂಕರ್ ಅಮೇರಿಕಾ, ಚೀನಾದಂತಹ ರಾಷ್ಟ್ರಗಳ ಭಾರತ ರಾಯಭಾರಿಯೂ ಆಗಿದ್ದರು. ಅವರ ಅನುಭವವನ್ನು ಮೊದಲ ಅವಧಿಯಲ್ಲಿ ಚೆನ್ನಾಗಿಯೇ ಬಳಸಿಕೊಂಡ ಮೋದಿ ಎರಡನೇ ಅವಧಿಗೆ ಅವರನ್ನೇ ವಿದೇಶಾಂಗ ಸಚಿವರಾಗಿಸಿಬಿಟ್ಟರು. ಮೊದಲೆಲ್ಲಾ ಅಧಿಕಾರಿಯೊಬ್ಬ ಹೀಗೆ ಸಚಿವನಾಗಬೇಕೆಂದರೆ ಆತ ಗಾಂಧಿ ಪರಿವಾರಕ್ಕೆ ನಿಷ್ಠನಾಗಿರಬೇಕಿತ್ತು. ಆತನ ಪ್ರತಿಭೆ, ಸಾಮಥ್ರ್ಯ ಯಾವುದೂ ಲೆಕ್ಕಕ್ಕೆ ಬರುತ್ತಿರಲಿಲ್ಲ. ಅಬ್ದುಲ್ ಕಲಾಂರು ಕುಳಿತ ಸ್ಥಾನಕ್ಕೆ ಪ್ರತಿಭಾ ಪಾಟಿಲ್ರನ್ನು ತಂದಾಗಲೇ ಇದು ಅತಿಕೆಟ್ಟ ಅವಸ್ಥೆಗೆ ತಲುಪಿತ್ತು. ಮೋದಿ ಜೈಶಂಕರ್ರಂಥವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ಅಧಿಕಾರವನ್ನೂ ಅವರ ಕೈಗಿತ್ತು ಸಂಭಾಳಿಸುತ್ತಿರುವ ರೀತಿ ನಿಜಕ್ಕೂ ಅಭಿನಂದನೀಯ. ಅವರ ನಡೆಗಳೆಲ್ಲವೂ ಹಾಗೆಯೇ. ಆರಂಭದಲ್ಲಿ ಅದು ಅರ್ಥವಾಗುವುದು ಸ್ವಲ್ಪ ಕಷ್ಟ. ಕಾಲಕ್ರಮದಲ್ಲಿ ಫಲಿತಾಂಶಗಳು ನಮ ಕಣ್ಣಿಗೆ ರಾಚಲಾರಂಭಿಸುತ್ತವೆ. ರೈಲ್ವೆ ಸಚಿವರಾಗಿ ಸಮರ್ಥವಾಗಿಯೇ ದುಡಿಯುತ್ತಿದ್ದ ಪಿಯುಷ್ ಗೋಯಲ್ ಅಲ್ಲಿ ಮಾಡಬಹುದಾಗಿರುವ ಅನೇಕ ಕೆಲಸಗಳನ್ನು ಮುಗಿಸಿಬಿಟ್ಟಿದ್ದಾರೆನಿಸಿದೊಡನೆ ಅವರನ್ನು ಮತ್ತೊಂದು ಖಾತೆಗೆ ವಗರ್ಾಯಿಸಿದರು. ಈಗವರು ವಿಶೇಷವಾಗಿ ಭಾರತ ರಫ್ತು ಉದ್ಯಮವನ್ನು ಹೆಚ್ಚುಗೊಳಿಸುವಲ್ಲಿ ನಿರತರಾಗಿದ್ದಾರೆ. ಅವರ ಟ್ವೀಟ್ಗಳನ್ನು ಅನುಸರಿಸುವ ಪ್ರತಿಯೊಬ್ಬನೂ ಅವರು ಮಾಡುತ್ತಿರುವ ಕೆಲಸವನ್ನು ನೋಡಿ ಅಚ್ಚರಿಗೊಳ್ಳುವಂತಿದೆ. ನರೇಂದ್ರಮೋದಿಯವರ ಇಂತಹ ಪ್ರಯಾಸದಿಂದಾಗಿ ಭಾರತ ಇಂದು ಜಗತ್ತಿನ ಅತಿದೊಡ್ಡ ಅಕ್ಕಿ ರಫ್ತುದಾರನಾಗಿ ಹೆಸರು ಮಾಡುತ್ತಿದೆ. 2021ರ ಅಕ್ಕಿ ರಫ್ತು ಮಾರುಕಟ್ಟೆಯಲ್ಲಿ ಭಾರತದ ಪಾಲು ಹೆಚ್ಚುಕಡಿಮೆ ಶೇಕಡಾ 45ರಷ್ಟು. ಅಂದರೆ ಜಗತ್ತಿನಲ್ಲಿ ರಫ್ತಾಗುವ ಒಟ್ಟೂ ಅಕ್ಕಿಯ ಅರ್ಧದಷ್ಟು ಭಾಗ ನಮ್ಮದ್ದೇ! ಈ ವರ್ಷ ಹೆಚ್ಚು-ಕಡಿಮೆ 22 ದಶಲಕ್ಷ ಟನ್ಗಳಷ್ಟು ಅಕ್ಕಿಯನ್ನು ನಾವು ರಫ್ತು ಮಾಡಲಿದ್ದೇವೆ. ನಮ್ಮ ನಂತರದ ಅತಿದೊಡ್ಡ ರಫ್ತುದಾರರಾದ ಥಾಯ್ಲ್ಯಾಂಡ್, ವಿಯೆಟ್ನಾಂ ಮತ್ತು ಪಾಕಿಸ್ತಾನಗಳನ್ನು ಒಟ್ಟೂ ಸೇರಿಸಿದರೂ ಅದಕ್ಕಿಂತ ಹೆಚ್ಚು ರಫ್ತು ನಮ್ಮದ್ದೇ. ಈ ವರ್ಷವಂತೂ ಕೊವಿಡ್ನ ಕಾರಣದಿಂದಾಗಿ ಚೀನಾ, ವಿಯೆಟ್ನಾಂ, ಬಾಂಗ್ಲಾದೇಶಗಳೂ ನಮ್ಮ ಬಳಿಯೇ ಅಕ್ಕಿ ಒಯ್ಯುತ್ತಿವೆ. ಇಷ್ಟಕ್ಕೂ ತೊಂದರೆಯಾಗುತ್ತಿದ್ದುದೇನು ಗೊತ್ತೇ? ರಫ್ತು ಮಾಡುವ ಬಂದರಿನಲ್ಲಿ ಸಾಕಷ್ಟು ವ್ಯವಸ್ಥೆ ಇಲ್ಲದೇ ಅನ್ಯದೇಶದ ಹಡಗುಗಳು ಕಾದು ನಿಂತುಕೊಂಡಿರಬೇಕಿತ್ತಲ್ಲ, ಮತ್ತು ಅದಕ್ಕಾಗಿ ಹೆಚ್ಚು ಬಾಡಿಗೆ ಕಟ್ಟಬೇಕಾಗುತ್ತಿತ್ತಲ್ಲ, ಅದು ನಮ್ಮ ಅಕ್ಕಿಯನ್ನು ದುಬಾರಿಯಾಗಿಸಿಬಿಡುತ್ತಿತ್ತು. ಈಗ ಕಾಕಿನಾಡದ ಪಕ್ಕದಲ್ಲೇ ಇನ್ನೊಂದು ಬಂದರು ಅಭಿವೃದ್ಧಿಪಡಿಸಿಕೊಂಡು ಅಕ್ಕಿ ರಫ್ತು ಮಾಡಲಾರಂಭಿಸಿದ್ದೇವೆ. ಇದು ನಮ್ಮನ್ನು ಜಗತ್ತಿನ ರಫ್ತುಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುತ್ತಿದೆ. ಇಷ್ಟೇ ಅಲ್ಲ, 2026ರ ವೇಳೆಗೆ ಭಾರತ ಡ್ರೋಣ್ ವ್ಯವಹಾರದಲ್ಲಿ ಹೆಚ್ಚು-ಕಡಿಮೆ 15 ಸಾವಿರಕೋಟಿಯಷ್ಟು ವಹಿವಾಟು ನಡೆಸಲಿದೆ. ಸದ್ಯದಮಟ್ಟಿಗೆ ಭಾರತೀಯ ಕಂಪೆನಿಗಳು ಇಲ್ಲಿ ಹೊಂದಿರುವ ವಹಿವಾಟು ಬರಿ 80 ಕೋಟಿಯಷ್ಟು ಮಾತ್ರ. ಡ್ರೋಣ್ಗಳಿಗೆ ಸಂಬಂಧಪಟ್ಟ ನೀತಿಯನ್ನು ಬದಲಾಯಿಸಿ ಭಾರತ ತಂದಿರುವ ಹೊಸ ಯೋಜನೆಗಳು ಉತ್ಪಾದಕರಿಗೆ ಹೆಚ್ಚು ಶಕ್ತಿಯನ್ನು ತುಂಬಲಿವೆ. ಆ ಮೂಲಕ ಸಾಕಷ್ಟು ಉದ್ಯೋಗವನ್ನು ಬರಲಿರುವ ದಿನಗಳಲ್ಲಿ ನಿಸ್ಸಂಶಯವಾಗಿ ಸೃಷ್ಟಿಸಲಿದೆ. ನರೇಗಾ ಕಷ್ಟಕಾಲದಲ್ಲಿ ಉದ್ಯೋಗ ಕೊಡುವ ಯೋಜನೆ ಇರಬಹುದು ನಿಜ. ಆದರೆ ಈ ಯೋಜನೆ ಇತರೆ ಉದ್ಯೋಗಗಳಂತೆ ಸ್ವಾಭಿಮಾನದ್ದಲ್ಲ, ಬದಲಿಗೆ ಸಕರ್ಾರ ಕರುಣೆಯಿಂದ ಕೊಡುತ್ತಿರುವುದು ಎನಿಸಿಬಿಡುತ್ತದೆ. ಹೆಚ್ಚು-ಹೆಚ್ಚು ಅಧಿಕೃತವಾದ ಉದ್ಯೋಗಗಳು ಸೃಷ್ಟಿಯಾಗಬೇಕು. ಉತ್ಪಾದನೆಗೆ ಜನ ಸಜ್ಜಾಗಬೇಕು. ಅದಕ್ಕಾಗಿಯೇ ಮೋದಿಯವರ ಈ ಎರಡನೇ ಅವಧಿ ತನ್ನನ್ನು ತಾನು ಜೋಡಿಸಿಕೊಂಡಿದೆ. ಇತ್ತೀಚೆಗೆ ಮುಖ್ಯ ಆಥರ್ಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮಾತನಾಡುತ್ತಾ ಪ್ರತಿ ಕರೋನಾ ಅಲೆ ಬಂದು ಹೋದ ನಂತರವೂ ಭಾರತ ಆಥರ್ಿಕ ಚೇತರಿಕೆಯನ್ನು ಅಚ್ಚರಿ ಎಂಬಂತೆ ತೋರಿಸುತ್ತಿದೆ. ಈಗ ಮೂರನೇ ಅಲೆ ಬರದೇ ಹೋದರೆ ನಮ್ಮ ಜಿಡಿಪಿ ಅಭಿವೃದ್ಧಿ ದರ ಎರಡಂಕಿ ಮುಟ್ಟಲಿದೆ ಎಂಬ ಅವರ ವಿಶ್ವಾಸ ನೆಮ್ಮದಿ ತರುವಂಥದ್ದು.


ಕಾಂಗ್ರೆಸ್ಸು ಹಾಡಿದ್ದನ್ನೇ ಹಾಡುವ ಕಿಸಬಾಯಿ ದಾಸನಾಗಿ ಜನರೆದುರು ಬೆತ್ತಲಾಗಿ ನಿಂತಿದೆ. ಮುಂಬೈ-ಅಹ್ಮದಾಬಾದ್ಗಳ ನಡುವಿನ ಬುಲೆಟ್ ಟ್ರೈನಿಗೆ ಮುಂಬೈನಲ್ಲಿ ಕಡಿಯಬೇಕಾಗಿರುವ 11 ಮರಗಳು ಮತ್ತು ಬೇರೆಡೆ ನೆಡಬೇಕಾಗಿರುವ 141 ಮರಗಳ ಕುರಿತಂತೆ ಪ್ರತಿಭಟನಾಕಾರರು ಗೌಜುಗದ್ದಲ ಆರಂಭಿಸಿಬಿಟ್ಟಿದ್ದಾರೆ. ಹೇಗಾದರೂ ಮಾಡಿ ಈ ವೇಗದ ರೈಲನ್ನು ತಡೆದರೆ 2024ರಲ್ಲಿ ಮೋದಿಯನ್ನು ಪ್ರಶ್ನಿಸಬಹುದು ಎಂಬುದು ಅವರ ಧಾವಂತ. ಆದರೆ 2024ರ ವೇಳೆಗೆ ಮೋದಿ ಜನರ ಕೈಗಳಿಗೆ ದುಡಿಯುವಷ್ಟು ಕೆಲಸ, ಜೇಬಿನ ತುಂಬ ಸಂಬಳ ಬರುವಂತೆ ಮಾಡುವ ಯೋಜನೆ ಕಟ್ಟಿಕೊಂಡಿದ್ದಾರೆ. ಆಗ ಇವರ ಆಟವೆಲ್ಲವೂ ಸಾಕ್ಷಾತ್ತು ನಿಂತುಹೋಗಿಬಿಡುತ್ತದೆ.

ಸದಾ ದೇಶದ ಕುರಿತಂತೆ ಕನಸು ಕಾಣುವ, ಅದನ್ನು ನನಸು ಮಾಡಿಕೊಳ್ಳಲು ಗಂಧದ ಕೊರಡಿನಂತೆ ತನ್ನ ತಾನು ತೇಯ್ದುಕೊಳ್ಳುತ್ತಿರುವ ಮೋದಿ ಜನರ ಹೃದಯದಲ್ಲಿ ಬಲವಾಗಿ ನೆಲೆಯೂರಿಬಿಟ್ಟಿದ್ದಾರೆ. ಹೀಗಾಗಿಯೇ ಪೆಟ್ರೋಲ್ ಬೆಲೆ ಹೆಚ್ಚಾದಾಗಲೂ ಆತ ನಮ್ಮ ಒಳಿತಿಗೇ ಅದನ್ನು ಬಳಸುತ್ತಿದ್ದಾನೆ ಎಂಬ ವಿಶ್ವಾಸದಿಂದ ಸಾಮಾನ್ಯ ಜನತೆ ಕಾಯುತ್ತಿರೋದು. ಮೋದಿ ಬಡವರ ಒಳಿತಿಗಾಗಿ, ರಾಷ್ಟ್ರದ ಏಕತೆಗಾಗಿ, ಬಲಿಷ್ಠಭಾರತ ನಿಮರ್ಾಣಕ್ಕಾಗಿ ಹಗಲು-ರಾತ್ರಿ ಪಡುತ್ತಿರುವ ಪ್ರಯಾಸ ಸಾಮಾನ್ಯ ಜನರಿಗೂ ಗೊತ್ತಿರುವುದರಿಂದಲೇ ಇವರ ಎಲ್ಲ ಹೋರಾಟಗಳೂ ನೀರುಪಾಲಾಗುತ್ತಿವೆ. ಒಂದೆರಡಲ್ಲ, ಏಳು ದಶಕಗಳ ತಪಸ್ಸಿನ ನಂತರ ಸಿಕ್ಕಿರುವ ಪ್ರಧಾನಿ ಈತ. ಅವರ ಹುಟ್ಟು ಈ ನಾಡಿನ ಗೌರವಕ್ಕೆ ಕಾರಣವಾಗಿದೆ. ಮತ್ತೊಮ್ಮೆ ನೂಕರ್ಾಲ ಆರೋಗ್ಯವಂತರಾಗಿ ಬಾಳಲೆಂದು ಭಗವಂತನಲ್ಲಿ ಶ್ರದ್ಧೆಯಿಂದ ಪ್ರಾಥರ್ಿಸುವೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top