National

10 ಲಕ್ಷದ ಸೂಟಿನ ನಂತರ ಮೋದಿಯವರ ದೊಡ್ಡ ಹಗರಣ ಇದು!

ಇತ್ತೀಚಿನ ದಿನಗಳಲ್ಲಿ ಫೇಕ್ ನ್ಯೂಸ್ಗಳದ್ದೇ ಭರಾಟೆ. ಜನಪ್ರಿಯ ಪತ್ರಕರ್ತರಂತೂ ಸೊಷಿಯಲ್ ಮಿಡಿಯಾಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಫೇಕ್ ನ್ಯೂಸ್ಗಳಿಗೆ ಆತುಬಿದ್ದಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆಗಿನ ಮಾಹಿತಿ ಮತ್ತು ಪ್ರಸಾರ ಸಚಿವೆಯಾಗಿದ್ದ ಸ್ಮೃತಿ ಇರಾನಿಯವರು ಫೇಕ್ ನ್ಯೂಸ್ ಹರಡುವ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದಾಕ್ಷಣ ದೇಶಾದ್ಯಂತ ಭಾರಿ ಕೋಲಾಹಲವೆದ್ದಿತ್ತು. ಮಾಧ್ಯಮಗಳ ಸ್ವಾತಂತ್ರ್ಯವನ್ನು ಸರ್ಕಾರ ಕಸಿಯುತ್ತಿದೆ ಎಂಬ ಮಾತುಗಳು ಕೇಳಿಬಂದವು. ಸ್ಮೃತಿ ಇರಾನಿಯವರು ತಮ್ಮ ಮಾತುಗಳನ್ನು ಹಿಂಪಡೆದರು.

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋರ್ ಅವರು ಸೊಷಿಯಲ್ ಮಿಡಿಯಾದಲ್ಲಿ ‘ಹಮ್ ಫಿಟ್ ತೊ ಇಂಡಿಯಾ ಫಿಟ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ದೇಹ ಸದೃಢವಾಗಿದ್ದರೆ, ದೇಶ ಸದೃಢವಾಗಿರುತ್ತದೆ ಎಂಬ ಚಿಂತನೆಯನ್ನು ಹೊತ್ತ ಈ ಅಭಿಯಾನದಡಿಯಲ್ಲಿ ತಾವು ಮಾಡಿದ ದೈಹಿಕ ವ್ಯಾಯಾಮದ ವಿಡಿಯೊವನ್ನು ಸೊಷಿಯಲ್ ಮಿಡಿಯಾದಲ್ಲಿ ಹಾಕಿ ಇನ್ನೊಬ್ಬರಿಗೆ ಸವಾಲನ್ನು ನೀಡಬೇಕು. ಈ ಅಭಿಯಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯವರು ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಸವಾಲನ್ನು ಸ್ವೀಕರಿಸಿದ ಮೋದಿಯವರು ದಿನನಿತ್ಯ ಜೀವನದಲ್ಲಿ ಯೋಗದ ಮಹತ್ವವನ್ನು ಸಾರುವ ತಮ್ಮ ಯೋಗದ ವಿಡಿಯೊವನ್ನು ಬಿಡುಗಡೆಮಾಡಿದ್ದರು. ‘ನರೇಂದ್ರಮೋದಿಯವರು ಈ ವಿಡಿಯೊಗೆ ಎಷ್ಟು ಖರ್ಚು ಮಾಡಿರಬಹುದು?’ ಎಂಬ ಕುತೂಹಲ ಒಂದಷ್ಟು ಜನರಿಗೆ!! ಅದು ಯಾವಾಗಲೂ ಹಾಗೆಯೇ! ಜನಪ್ರಿಯ ವ್ಯಕ್ತಿಯೊಬ್ಬನ ತಪ್ಪು ನಡೆಗಳ ವಿರುದ್ಧ ಮಾತನಾಡಲು ಜನ ಕಾಯುತ್ತಿರುತ್ತಾರೆ. ಆತ ತಪ್ಪೇ ಮಾಡಲಿಲ್ಲವೆಂದಾದರೆ ಆತನ ಬಟ್ಟೆ, ಆಹಾರ, ಬಣ್ಣ ಹೀಗೆ ಬೇರೆ-ಬೇರೆ ವಿಚಾರಗಳ ಕುರಿತು ನ್ಯೂಸ್ ಅದರಲ್ಲೂ ಫೇಕ್ನ್ಯೂಸ್ಹರಡಲು ಮುಂದಾಗುತ್ತಾರೆ!

ಮೋದಿಯವರ ಫಿಟ್ನೆಸ್ ವಿಡಿಯೊ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇಂಡಿಯಾ ಸ್ಕೂಪ್ಸ್ ಎಂಬ ವೆಬ್ಸೈಟ್ ಒಂದು ಪ್ರಧಾನಿಯವರು ಅದಕ್ಕೆ 35 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದಾರೆಂಬ ಫೇಕ್ ನ್ಯೂಸ್ ಅನ್ನು ಪ್ರಕಟ ಮಾಡಿತು. ಈ ರೀತಿಯ ಸುದ್ದಿಗಳಿಗಾಗಿಯೇ ಕಾಯುತ್ತಾ ಕುಳಿತಿದ್ದವರೊಂದಷ್ಟು ಮಂದಿ ಈ ವರದಿ ಎಲ್ಲೆಡೆ ಹರಿದಾಡುವಂತೆ ಮಾಡಿದರು. ಕಾಂಗ್ರೆಸ್ನ ಮಂತ್ರಿ ಶಶಿ ತರೂರ್, ಫೇಕ್ ಸುದ್ದಿಗಳನ್ನು ಹರಡಿಸುವುದರಲ್ಲೇ ಸಮಯ ಕಳೆಯುವ ಪತ್ರಕರ್ತ ನಿಖಿಲ್ ವಾಘ್ಲೇ, ಆಮ್ ಆದ್ಮಿ ಪಕ್ಷದ ಬೆಂಬಲಿಗರು ಸೇರಿದಂತೆ ಒಂದಷ್ಟು ಬುದ್ಧಿಜೀವಿಗಳು ಈ ಸುದ್ದಿಯನ್ನು ವೈರಲ್ ಮಾಡಿದ್ದರು.

ಯಾವ ಪತ್ರಿಕೆಗಳಿಗೂ ಸಿಗದ ಈ ಮಾಹಿತಿ ಇದರಲ್ಲಿ ಹೇಗೆ ಬರಲು ಸಾಧ್ಯ ಎಂದು ಒಂದಷ್ಟು ಪತ್ರಕರ್ತರು ಈ ವೆಬ್ ಸೈಟ್ ನ ಹಿಂದಿರುವ ಸತ್ಯಾಸತ್ಯತೆಯನ್ನು ಹುಡುಕಲು ಮುಂದಾದರು ಈ ಇಂಡಿಯಾ ಸ್ಕೂಪ್ಸ್ ಪೇಜ್ ಪ್ರಾರಂಭಗೊಂಡದ್ದೇ ಏಪ್ರಿಲ್ 27, 2018 ರಲ್ಲಿ. ಆರ್ಶಿ ಖಾನ್ ಫ್ಯಾನ್ ಪೇಜ್ ಇಂಡಿಯಾ ಸ್ಕೂಪ್ಸ್ ಎಂದಾಗಿದೆ ಎಂಬ ಸತ್ಯ ತಿಳಿಯಿತು. ಇನ್ನಷ್ಟು ಒಳಹೊಕ್ಕಾಗ ಫ್ಲಿನ್ ರೆಮಿಡಿಯೊಸ್ ಎಂಬಾತ ಆ ಪೇಜ್ನ ಅಸಲಿ ಮಾಲಿಕ ಎಂಬುದು ಬಯಲಿಗೆ ಬಂತು. ಈ ಫ್ಲಿನ್ ರೆಮಿಡಿಯೊಸ್ನ ಮೇಲೆ 2010 ರಲ್ಲಿ ಮಾಡೆಲ್ ಒಬ್ಬರು ದೈಹಿಕ ಹಿಂಸಾಚಾರದ ಪ್ರಕರಣವನ್ನು ದಾಖಲು ಮಾಡಿದ್ದರು. ಇತ್ತೀಚೆಗೆ ಆತ ಯಾರ ಹೆಸರಲ್ಲಿ ಈ ಪೇಜ್ ಇತ್ತೋ ಅದೇ ಆರ್ಶಿ ಖಾನ್ರೊಡನೆ ಗುರುತಿಸಿಕೊಂಡಿದ್ದ. ಅವರಿಬ್ಬರ ಮೇಲೆ ಹಣದೋಚುವ ದೂರು ದಾಖಲಾಗಿದೆ. ಆಗ ತಿಳಿದು ಬಂದದ್ದು ಪ್ರಧಾನಿ ಮೋದಿಯವರು ವಿಡಿಯೊಗೆ 35 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದು ಫೇಕ್ ನ್ಯೂಸ್. ಅಷ್ಟೇ ಅಲ್ಲದೇ, ಆ ವರದಿಯನ್ನು ಪ್ರಕಟಗೊಳಿಸಿದ ವೆಬ್ ಸೈಟ್ ಕೂಡ ಫೇಕ್ ಎಂದು!

ಕನ್ನಡದ ಒಂದಷ್ಟು ಮೋದಿ ವಿರೋಧಿ ಸೋ ಕಾಲ್ಡ್ ಬುದ್ಧಿಜೀವಿಗಳೂ ಇದನ್ನು ತಮ್ಮ ವಾಲ್ ನಲ್ಲಿ ಶೇರ್ ಮಾಡಿಕೊಂಡಿದ್ದಲ್ಲದೇ ತಮ್ಮ ತಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿಯೂ ಹರಡಿಸಿದ್ದರು. ಈ ನ್ಯೂಸ್ ಫೇಕ್ ಎಂಬುದು ಈಗ ಸಾಬೀತಾಗಿರುವುದರಿಂದ ಅದನ್ನು ಶೇರ್ ಮಾಡಿದವರನ್ನು ನೀವೀಗ ತರಾಟೆಗೆ ತೆಗೆದುಕೊಳ್ಳಬಹುದು.

Click to comment

Leave a Reply

Your email address will not be published. Required fields are marked *

Most Popular

To Top