National

28 ವರ್ಷಗಳ ನಂತರ ಸಿಸ್ಟರ್ ಅಭಯಾಳಿಗೆ ಮುಕ್ತಿ ದೊರಕಿತು!

ಆಕೆ ಕ್ಯಾಥೊಲಿಕ್ ಚಚರ್ಿಗೆ ಸೇರಿದ ಕಾಲೇಜೊಂದರಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುತ್ತಿದ್ದಳು. ಆಕೆಗಿನ್ನೂ 19 ವರ್ಷವಾಗಿತ್ತಷ್ಟೇ. ಲವಲವಿಕೆಯಿಂದ ಕೂಡಿದ್ದ ಹುಡುಗಿ. ಎಲ್ಲರಿಗೂ ಬೇಕಾದವಳಾಗಿದ್ದಳು. ಅವಳ ಮಾತು, ನಗು ಜೊತೆಗೆ ಶಿಕ್ಷಕರೆಲ್ಲರಿಗೂ ಪ್ರಿಯವಾಗುವ ಅವಳ ವ್ಯಕ್ತಿತ್ವ ಸಹಜವಾಗಿಯೇ ಅವಳನ್ನು ಎಲ್ಲರ ಕಣ್ಮಣಿಯಾಗಿಸಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಅವಳ ದೇಹ ಆಕೆಯ ಕೋಣೆಯ ಪಕ್ಕದ ಬಾವಿಯಲ್ಲಿ ಸಿಕ್ಕಿತು. 1992ರ ಮಾಚರ್್ 27. ಕೇರಳದ ಕೊಟ್ಟಾಯಂನ ಸಂತ ಪಯಸ್ ಕಾನ್ವೆಂಟ್ನ ಈ ಪ್ರಕರಣ ದೇಶದೆಲ್ಲೆಡೆ ಸುದ್ದಿಯಾಯ್ತು. ಆತ್ಮಹತ್ಯೆ ಅಥವಾ ಕೊಲೆ ಯಾವುದಿರಬಹುದು? ಎಂಬ ಆತಂಕ ಎಲ್ಲರಲ್ಲೂ. ಆದರೆ ಮೇಲ್ನೋಟಕ್ಕೆ ಅತ್ಯಾಚಾರದಂತಹ ಯಾವ ಲಕ್ಷಣಗಳೂ ಕಂಡು ಬಂದಿರಲಿಲ್ಲ. ಸಹಜವಾಗಿಯೇ ಆತ್ಮಹತ್ಯೆ ಎಂಬ ಹೆಸರಿನಲ್ಲಿ ಒಟ್ಟಾರೆ ಕೇಸನ್ನು ಮುಚ್ಚಿಬಿಡಲಾಯ್ತು. ಆದರೆ, ಒಳಗೆ ಆಕೆಯ ವ್ಯಕ್ತಿತ್ವವನ್ನು ಬಲ್ಲ ಅನೇಕರಿಗೆ ಯಾವುದೋ ಅವ್ಯಕ್ತವಾಗಿರುವ ಸಂಗತಿ ಆಕೆಯ ಸಾವಿನ ಹಿಂದೆ ಅಡಗಿದೆ ಎಂಬ ಅನುಮಾನ ಇದ್ದೇ ಇತ್ತು. ಸಿಸ್ಟರ್ ಬಣಿಕಾಸಿಯಾ ಮತ್ತು 66 ಇತರೆ ನನ್ಗಳು ಕೇರಳ ಸಕರ್ಾರಕ್ಕೆ ವಿಶೇಷವಾದ ಮನವಿ ಮಾಡಿಕೊಂಡರು. ‘ಈ ಘಟನೆಯಲ್ಲಿ ಕಾಣದ ಶಕ್ತಿಯೊಂದು ಪ್ರಭಾವ ಬೀರಿ ಆಕೆಯ ಕೊಲೆಯನ್ನು ಆತ್ಮಹತ್ಯೆಯಾಗಿಸಿಬಿಡುವ ಧಾವಂತದಲ್ಲಿದೆ. ದಯಮಾಡಿ ವಿಶೇಷ ತನಿಖೆ ನಡೆಸಿ’ ಎಂದು ಕೇಳಿಕೊಂಡರು. ಮರುವರ್ಷವೇ ನ್ಯಾಯಾಲಯದಲ್ಲೂ ಇದರ ಗದ್ದಲ ಆರಂಭವಾಗಿ ಮುಖ್ಯಮಂತ್ರಿ ಕರುಣಾಕರನ್ ಬೇಸತ್ತು ಪ್ರಕರಣವನ್ನು ಸಿಬಿಐಗೆ ವಗರ್ಾಯಿಸಿಬಿಟ್ಟರು. ಕೇಂದ್ರ ತನಿಖಾದಳ ಬಹಳ ದಿನ ತೆಗೆದುಕೊಳ್ಳಲಿಲ್ಲ. ಕೆಲವೇ ತಿಂಗಳುಗಳಲ್ಲಿ ತನಿಖೆ ನಡೆಸಿ ಸಿಗಬೇಕಾದ ಯಾವ ಸುಳಿವೂ ಇಲ್ಲ ಎಂದಿತು. ಅಷ್ಟೇ ಅಲ್ಲ, ಎಲ್ಲ ಬಗೆಯ ವೈದ್ಯಕೀಯ ಸುಳಿವುಗಳನ್ನು ಸಂಗ್ರಹಿಸಲು ಸಾಕಷ್ಟು ತಡವಾಗಿಬಿಟ್ಟಿರುವುದರಿಂದ ಈ ಪ್ರಕರಣವನ್ನು ಇನ್ನು ಎಳೆಯುವುದು ವ್ಯರ್ಥವೆಂದು, ಆಕೆಯದ್ದು ಆತ್ಮಹತ್ಯೆಯೇ ಆಗಿರಬೇಕೆಂದು ನಿರ್ಧರಿಸಿ ನ್ಯಾಯಾಲಯದ ಮುಂದೆ ನಿಂತುಕೊಂಡಿತು. ಆದರೆ ಮ್ಯಾಜಿಸ್ಟ್ರೇಟರು ಈ ವರದಿಯನ್ನು ಮುಲಾಜಿಲ್ಲದೇ ತಿರಸ್ಕರಿಸಿ ಕಸದಬುಟ್ಟಿಗೆಸೆದರು. ಸಿಬಿಐ ಎರಡನೇ ಬಾರಿಗೆ ತನಿಖೆ ನಡೆಸಿ ಮತ್ತೊಂದು ವರದಿಯನ್ನು ನೀಡಿತು. ಸಹಾಯಕ ಪೊಲೀಸ್ ನಿದರ್ೇಶಕರಾದ ಸುರೀಂದರ್ ಪೌಲ್ ಹೊಸದೊಂದಷ್ಟು ವೈದ್ಯರುಗಳ ವರದಿಯನ್ನು ಆಧರಿಸಿ ಇದನ್ನು ಕೊಲೆ ಎಂಬ ನಿರ್ಣಯ ಕೊಟ್ಟರು. ಆದರೆ ಕೊಲೆಗಾರರನ್ನು ಹುಡುಕಬಲ್ಲ ಸಮಯ ಮೀರಿ ಹೋಗಿದೆ ಎಂದು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡರು. ಅಚ್ಚರಿ ಎಂದರೆ ನ್ಯಾಯಾಲಯ ಈ ಬಾರಿಯೂ ಈ ವರದಿಯನ್ನು ಕಸದಬುಟ್ಟಿಗೆಸೆಯಿತು. ಈ ವೇಳೆಗಾಗಲೇ 13 ವರ್ಷಗಳು ಕಳೆದು ಹೋಗಿದ್ದವು. ಆದರೆ ಪ್ರಕರಣವಿನ್ನೂ ಜೀವಂತವಾಗಿಯೇ ಇತ್ತು. ಮುಂದೆ ಪೊಲೀಸ್ ಅಧಿಕಾರಿ ಆರ್.ಆರ್ ಸಹಾಯ್ ಈ ಪ್ರಕರಣವನ್ನು ಕೈಗೆತ್ತಿಕೊಂಡು 2003ರಲ್ಲಿ ಈ ಘಟನೆಯಲ್ಲಿ ಯಾರ ಕೈವಾಡವೂ ಇಲ್ಲವೆಂದು, ಇದು ಅಕ್ಷರಶಃ ಆತ್ಮಹತ್ಯೆಯೇ ಎನ್ನುವ ಮೂರನೇ ವರದಿಯನ್ನು ಕೊಟ್ಟರು. ವಿಚಿತ್ರವೆಂದರೆ ನ್ಯಾಯಾಲಯ ಮತ್ತೆ ಇದನ್ನು ತಿರಸ್ಕರಿಸಿತು. ಇದಾದ ಐದು ವರ್ಷಗಳ ನಂತರ ಈ ಪ್ರಕರಣದಲ್ಲಿ ಸಿಬಿಐ ಯಾವ ಪ್ರಮುಖ ಸಾಧನೆಯನ್ನೂ ಮಾಡಲಾಗದಿದ್ದುದರಿಂದ ನ್ಯಾಯಾಲಯ ಕೊಚ್ಚಿ ವಿಭಾಗದ ಪೊಲೀಸರಿಗೆ ತನಿಖೆ ನಡೆಸುವ ಆದೇಶ ಕೊಟ್ಟಿತು. ಮೂರು ತಿಂಗಳೊಳಗೆ ವರದಿ ನೀಡುವಂತೆ ಸಮಯದ ಬಂಧನವೂ ಇತ್ತು. ಮುಖ್ಯ ಪೊಲೀಸ್ ಅಧಿಕಾರಿ ನಂದಕುಮಾರನ್ ನಾಯರ್ ಈಗ ವಿಚಾರಣೆಗೆ ಧುಮುಕಿದರು. ಅಚಾನಕ್ಕಾಗಿ ಸಂಜು ಮ್ಯಾಥ್ಯೂ ಅವರ ಕೈಗೆ ಸಿಕ್ಕ. ಆತ ಫಾದರ್ ಥಾಮಸ್ ಕೊಟ್ಟೂರ್ರನ್ನು ತೀರಿಕೊಂಡ ಸಿಸ್ಟರ್ ಅಭಯಾಳ ವಿದ್ಯಾಥರ್ಿನಿಲಯದ ಕೋಣೆಯಲ್ಲಿ ಸಾವಿನ ಒಂದು ದಿನದ ಮುಂಚೆ ಕಂಡಿದ್ದ. ಇದನ್ನೇ ಆಧಾರವಾಗಿರಿಸಿಕೊಂಡು ಫಾದರ್ ಥಾಮಸ್ ಬಂಧನವಾಯ್ತು. ಅವರ ಜೊತೆಗೆ ಫಾದರ್ ಜೋಸ್ ಪುತ್ರಿಕ್ ಕಾಯಲ್ ಮತ್ತು ಸಿಸ್ಟರ್ ಸೆಫಿ ಬಂಧನವಾಯ್ತು. ಮರುವರ್ಷವೇ ಇವರ ವಿರುದ್ಧ ಚಾಜರ್್ಶೀಟ್ ಸಲ್ಲಿಸಲಾಯ್ತು. ಸಿಬಿಐ ಇವರ ವಿರುದ್ಧ ಸುಳ್ಳು ಪತ್ತೆ ಪರೀಕ್ಷಣೆ ನಡೆಸುವ ಅನುಮತಿ ಪಡೆದುಕೊಂಡಿತು. ಬೆಂಗಳೂರಿನಲ್ಲಿ ಈ ಮೂವರನ್ನೂ ಈ ಯಂತ್ರಕ್ಕೊಳಪಡಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಲಾಯ್ತು. ಆದರೆ ‘ಯಾವ ಹೊಸ ಸುಳಿವೂ ಸಿಗಲಿಲ್ಲ’ ಎಂಬ ಸಾಲು ಬರೆದು ಸಿಡಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿಬಿಡಲಾಯ್ತು.

ಹೀಗಿರುವಾಗಲೇ ಈ ಸಿಡಿಯೊಳಗೆ ಇರುವ ದಾಖಲೆಗಳನ್ನು ತಿರುಚಲಾಗಿದೆ ಎಂಬ ವಿಚಾರವೊಂದು ಸುಳಿದಾಡಿತು. ತಿರುವನಂತಪುರದ ಸಕರ್ಾರಿ ಸಂಸ್ಥೆಯೊಂದು ಇದರ ತನಿಖೆ ನಡೆಸಿ ಫಾದರ್ ಥಾಮಸ್ರ ಮಾತುಗಳನ್ನು 30 ಕಡೆಗಳಲ್ಲಿ, ಸಿಸ್ಟರ್ ಸೆಫಿಯ ಮಾತುಗಳನ್ನು 23 ಕಡೆಗಳಲ್ಲಿ, ಮತ್ತು ಫಾದರ್ ಪುತ್ರಿಕ್ ಕಾಯಲ್ ಅವರ ಮಾತುಗಳನ್ನು 19 ಕಡೆಗಳಲ್ಲಿ ವಿರೂಪಗೊಳಿಸಿರುವುದು ಕಂಡು ಬಂತು. ಇದರ ಆಧಾರದ ಮೇಲೆ ಈ ಪ್ರಕರಣವನ್ನು ವಿಶೇಷ ಅಧ್ಯಯನಕ್ಕೊಳಪಡಿಸಿದಾಗ ಭಯಾನಕವಾದ ಸಂಗತಿಗಳು ಹೊರಬಂದವು. ತೀರಿಕೊಂಡ ಸಿಸ್ಟರ್ ಅಭಯಾಳ ಕೋಣೆಯ ರೆಫ್ರಿಜರೇಟರ್ನ ಬಳಿ ಸಿಕ್ಕ ನೀರಿನ ಬಾಟಲಿ ಮತ್ತು ಆಕೆಯ ಅಡುಗೆಮನೆ ಅಸ್ತವ್ಯಸ್ತಗೊಂಡಿದ್ದನ್ನು ವಿಶೇಷವಾಗಿ ಗಮನಿಸಲಾಯ್ತು. ಇದು ಆಕೆ ತೀರಿಕೊಳ್ಳುವ ಮುನ್ನ ಯಾರೊಂದಿಗೋ ಕಾದಾಟ ನಡೆಸಿದುದರ ಸ್ಪಷ್ಟ ಸಂಕೇತವಾಗಿತ್ತು. ಆಕೆಯ ಒಂದು ಚಪ್ಪಲಿ ಅಡುಗೆಮನೆಯೊಳಗಿದ್ದರೆ ಮತ್ತೊಂದು ಮನೆಬಾಗಿಲ ಹೊರಗಿತ್ತು. ಮನೆಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿರಲಿಲ್ಲ. ಹೊರಗಿನಿಂದಲೇ ಚಿಲಕ ಹಾಕಲಾಗಿತ್ತು. ಇವೆಲ್ಲವೂ ಈಗ ಕೊಲೆಯತ್ತಲೇ ಬೊಟ್ಟು ಮಾಡುತ್ತಿದ್ದವು. ದಂಡಪ್ರಯೋಗ ಮಾಡುತ್ತಿದ್ದಂತೆ ಫಾದರ್ ಥಾಮಸ್ ಕೊಟ್ಟೂರ್ ಎಲ್ಲವನ್ನೂ ಬಾಯಿಬಿಟ್ಟರು. ಆತ ಫಾದರ್ ಜೋಸ್ನೊಂದಿಗೆ ಸೇರಿ ಸಿಸ್ಟರ್ ಸೆಫಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದರು. 92ರ ಆ ದುರದೃಷ್ಟಕರ ದಿನದ ಒಂದು ದಿನ ಮುನ್ನ ಸಿಸ್ಟರ್ ಸೆಫಿ ಇವರುಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಸಿಸ್ಟರ್ ಅಭಯಾ ಅದನ್ನು ನೋಡಿಬಿಟ್ಟಿದ್ದರು. ಬ್ರಹ್ಮಚರ್ಯದ ವ್ರತ ಸ್ವೀಕರಿಸಿ, ಏಸುಕ್ರಿಸ್ತನ ಮುಂದೆ ಪ್ರಮಾಣ ಮಾಡಿರುವ ಇವರುಗಳಿಗೆ ಈ ಸಂಬಂಧ ಹೊರಬಂದರೆ ಸಾಕಷ್ಟು ಅನಾಹುತವಾಗುವ ಸಾಧ್ಯತೆಯಿತ್ತು. ಸಿಸ್ಟರ್ ಸೆಫಿ ಅಭಯಾಳ ಕೋಣೆಗೆ ಹೋಗಿ ಆಕೆಗೆ ಬೆದರಿಸಿ ಆಕೆಯೊಂದಿಗೆ ಕಿತ್ತಾಟ ನಡೆಸಿದಳು. ಈ ಹಂತದಲ್ಲಿಯೇ ಸಿಸ್ಟರ್ ಅಭಯಾ ಮೇಲೆ ಮಾರಣಾಂತಿಕ ಹಲ್ಲೆಯಾಗಿ ಆಕೆ ಪ್ರಾಣ ಕಳೆದುಕೊಂಡಳು. ಫಾದರ್ ಥಾಮಸ್ ಸಹಕಾರ ನೀಡಿ ಅವಳನ್ನು ತಂದು ಬಾವಿಗೆಸೆದುಬಿಟ್ಟರು. ಆಗಲೇ ನ್ಯಾಯಾಲಯಕ್ಕೂ ಗೊತ್ತಾಗಿದ್ದು ಬಾವಿಗೆಸೆಯುವಾಗ ಸಿಸ್ಟರ್ ಅಭಯಾ ಇನ್ನೂ ತೀರಿಕೊಂಡಿರಲಿಲ್ಲ ಅಂತ. ಏಸುಕ್ರಿಸ್ತನ ಹೆಸರು ಹೇಳಿಕೊಂಡು ಈ ಅಯೋಗ್ಯರು ಒಂದು ಹೆಣ್ಣುಮಗಳನ್ನು ಜೀವಂತವಾಗಿ ಜಲಸಮಾಧಿಗೈದಿದ್ದರು. ಮೊನ್ನೆ ಇತ್ತೀಚೆಗೆ ತಿರುವನಂತಪುರದ ವಿಶೇಷ ಸಿಬಿಐ ನ್ಯಾಯಾಲಯ ಥಾಮಸ್ ಮತ್ತು ಸೆಫಿಗೆ ಈ ಪ್ರಕರಣದ ಮುಖ್ಯ ಆರೋಪಿಗಳೆಂದು ಶಿಕ್ಷೆ ನೀಡಿತು. 28 ವರ್ಷಗಳ ನಂತರ ಅಭಯಾಳ ಸಾವಿಗೆ ನ್ಯಾಯ ಸಿಕ್ಕಿತು. ಆದರೆ ಎಲ್ಲ ಪತ್ರಿಕೆಗಳೂ ಮುಗುಮ್ಮಾಗಿ ಕುಳಿತುಬಿಟ್ಟಿವೆ. ಹಿಂದೂ ಸಂತನೊಬ್ಬ ಅವ್ಯವಹಾರ ನಡೆಸಿದಾಗ ದಿನಗಟ್ಟಲೆ ಅದನ್ನೇ ಟಿಆರ್ಪಿಗಾಗಿ ತೋರಿಸುವ ಇವುಗಳು ಸಿಸ್ಟರ್ ಅಭಯಾಳ ಕಥೆಯನ್ನು ಎಂದೂ ಹೊರಗೆಡವಲೇ ಇಲ್ಲ. ಹೋಗಲಿ ಬಿಡಿ, ಧರ್ಮ, ಮತ-ಪಂಥ ಇವ್ಯಾವುವೂ ಹೆಣ್ಣಿನ ಸುಂದರ ಬದುಕಿಗೆ ಅಡ್ಡ ಬರಬಾರದು. ತಮ್ಮ ತೃಷೆ ತೀರಿಸಿಕೊಳ್ಳಲು ಹೀಗೆ ಹೆಣ್ಣುಮಗಳೊಬ್ಬಳ ಜೀವ ತೆಗೆದುಕೊಳ್ಳುವ ಈ ಅಯೋಗ್ಯರಿಗೆ ಧಾಮರ್ಿಕ ವ್ಯಕ್ತಿಗಳೆಂದು ಕರೆಸಿಕೊಳ್ಳುವ ಯಾವ ಹಕ್ಕೂ ಇಲ್ಲ. ಒಂದೇ ಸಂತೋಷವೆಂದರೆ ಇಂಥವರು ನಗ್ನರಾಗಿ ಸಮಾಜದ ಮುಂದೆ ಕೊನೆಗೂ ನಿಂತಿದ್ದು. ಏಸುಕ್ರಿಸ್ತನ ಪ್ರತಿನಿಧಿಗಳೆಂದು ಕರೆದುಕೊಳ್ಳುವ ಇಂಥವರ ಬಣ್ಣ ಬಯಲಾಗಿದ್ದು ಒಳ್ಳೆಯದ್ದೇ ಆಯ್ತು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top