National

L & T ಕಂಪನಿಯ ಚೇರ್‌ಮನ್ ನರೇಂದ್ರಮೋದಿಯವರ ಬಗ್ಗೆ ಹೇಳಿದ್ದೇನು ಗೊತ್ತೆ!?

ಲಾರ್ಸನ್ ಅಂಡ್ ಟರ್ಬೊದ (L &T) ತಂಡದ ಅಧ್ಯಕ್ಷರಾದ ಅನಿಲ್ ಮಣಿಭಾಯ್ ನಾಯಕ್ ಅವರು ನರೇಂದ್ರಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಪ್ರಶಂಸಿಸಿದ್ದಾರೆ. 2019 ರಲ್ಲಿ ಮತ್ತೆ ಮೋದಿಯವರೇ ಅಧಿಕಾರ ಸ್ವೀಕರಿಸಬೇಕೆಂದಿದ್ದಾರೆ. ಡಿಎನ್‌ಎ ಎಂಬ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ವೇಳೆ ಈ ಮಾತನ್ನು ಅವರು ಹೇಳಿದ್ದಾರೆ.

2019 ರ ಲೋಕಸಭಾ ಚುನಾವಣೆಯ ಕುರಿತು ಪ್ರಶ್ನಿಸಿದಾಗ ಅವರು ಈ ಚುನಾವಣೆ ಹಿಂದಿನ ವರ್ಷದ್ದಕ್ಕಿಂತ ಭಿನ್ನವಾದದ್ದು ಎಂದುತ್ತರಿಸಿದ್ದಾರೆ.

ಮಣಿಭಾಯ್ ನಾಯಕ್ ಅವರ ಪ್ರಕಾರ, ‘ಮೋದಿಯವರು ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಒಬ್ಬ ಕಠಿಣ ಟಾಸ್ಕ್ ಮಾಸ್ಟರ್’. ಮೋದಿಯವರ ಕೆಲಸದ ಶೈಲಿಯನ್ನು ವಿರೋಧಿಸುವವರೆಲ್ಲರ ಒತ್ತಡಕ್ಕೂ ಅವರು ನಿರಂತರ ತುತ್ತಾಗುತ್ತಿರುತ್ತಾರೆ ಎಂದವರು ಅಭಿಪ್ರಾಯಪಟ್ಟರು.

ಪ್ರಸ್ತುತ ಭಾರತೀಯ ರಾಜಕೀಯವನ್ನು ನಾಯಕ್ ಅವರು ಮೋದಿ ವರ್ಸಸ್ ಎಲ್ಲರೂ ಎಂದೇ ಕರೆದರು. ಮತ್ತು ಈ ಚುನಾವಣೆ ಪ್ರಧಾನಮಂತ್ರಿಯವರಿಗೆ ಕಷ್ಟಕರವಾಗಲಿದೆ ಎಂದು ವಿಶ್ಲೇಷಿಸಿದರು.

ಈ ವಿಚಾರಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅವರು ಪುನಃ ಮೋದಿಯವರು ಅಧಿಕಾರಕ್ಕೆ ಬರಲೇಬೇಕು. ಇಲ್ಲವಾದರೆ ಅತ್ಯಂತ ಕೆಟ್ಟ ಪರಿಸ್ಥಿತಿ ಉಂಟಾಗುತ್ತದೆ ಎಂದರು. ಆರೇ ತಿಂಗಳಲ್ಲಿ ಭಾರತ ಎರಡೆರಡು ಪ್ರಧಾನಿಗಳನ್ನು ಕಂಡ ಉದಾಹರಣೆಯನ್ನು ಅವರು ಈ ಸಂದರ್ಭದಲ್ಲಿ ನೀಡಿದರು.

ಕಾಂಗ್ರೆಸ್ಸು 100 ರಿಂದ 125 ಸೀಟುಗಳನ್ನು ಗೆಲ್ಲಬಹುದು. ಅದು ಅಧಿಕಾರಕ್ಕೆ ಬರಲು 12 ರಿಂದ 15 ಬೇರೆ-ಬೇರೆ ಪಕ್ಷಗಳ ಮೊರೆ ಹೋಗಬೇಕಾಗುತ್ತದೆ ಎನ್ನುವ ನಾಯಕ್ ಮುಂದುವರೆದು ಹಾಗೇನಾದರೂ ಆದರೆ ದೇಶಕ್ಕೆ ಅದು ಒಳ್ಳೆಯದಲ್ಲ ಎಂದೂ ಹೇಳಿದರು.

Click to comment

Leave a Reply

Your email address will not be published. Required fields are marked *

Most Popular

To Top